ಬೆಂಗಳೂರು: ಶಾಲೆಗಳು ಆರಂಭವಾಗಿರುವ ಈ ಸಂದರ್ಭದಲ್ಲಿ ಮಕ್ಕಳಲ್ಲಿ ಕಾಣಿಸಿಕೊಳ್ಳುವ ನಿರಂತರ ಹೊಟ್ಟೆನೋವನ್ನು ಸಾಮಾನ್ಯ ಸಮಸ್ಯೆ ಅಥವಾ ಶಾಲೆಗೆ ಹೋಗಲು ಇಷ್ಟವಿಲ್ಲ ಎಂಬ ಕಾರಣಕ್ಕೆ ನಿರ್ಲಕ್ಷಿಸಬಾರದು ಎಂದು ವೈಟ್‌ಫೀಲ್ಡ್‌ನ ಮೆಡಿಕವರ್ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯ ತಜ್ಞ ವೈದ್ಯರು ಪೋಷಕರಿಗೆ ಎಚ್ಚರಿಕೆ ನೀಡಿದ್ದಾರೆ.
ಕಳೆದ ಎರಡು ತಿಂಗಳಲ್ಲಿ 6 ರಿಂದ 15 ವರ್ಷದೊಳಗಿನ 15ಕ್ಕೂ ಹೆಚ್ಚು ಮಕ್ಕಳಿಗೆ ತೀವ್ರ ಅಪೆಂಡಿಸೈಟಿಸ್ (Appendicitis) ಸಮಸ್ಯೆಗೆ ಚಿಕಿತ್ಸೆ ನೀಡಲಾಗಿದೆ ಎಂದು ಆಸ್ಪತ್ರೆ ತಿಳಿಸಿದೆ.

ಸಾಮಾನ್ಯವಾಗಿ ಮಕ್ಕಳಲ್ಲಿ ಕಾಣಿಸಿಕೊಳ್ಳುವ ಹೊಟ್ಟೆನೋವು ಸ್ವಲ್ಪ ಸಮಯದಲ್ಲೇ ಕಡಿಮೆಯಾಗುತ್ತದೆ. ಆದರೆ ಹೊಟ್ಟೆನೋವು ನಿರಂತರವಾಗಿ ಮುಂದುವರಿಯುವುದು, ತೀವ್ರವಾಗುವುದು, ವಾಂತಿ, ಜ್ವರ, ಹಸಿವು ಕಡಿಮೆಯಾಗುವುದು ಅಥವಾ ಹೊಟ್ಟೆಯ ಬಲ ಕೆಳಭಾಗದಲ್ಲಿ ತೀವ್ರ ನೋವು ಕಾಣಿಸಿಕೊಳ್ಳುವುದು ಅಪೆಂಡಿಸೈಟಿಸ್‌ನ ಪ್ರಮುಖ ಲಕ್ಷಣಗಳಾಗಿರಬಹುದು. ವಿಶೇಷವಾಗಿ ಶಾಲಾ ದಿನಗಳಲ್ಲಿ ಇಂತಹ ಲಕ್ಷಣಗಳನ್ನು ಶಾಲೆಗೆ ಹೋಗಲು ಇಷ್ಟವಿಲ್ಲ ಎಂಬ ಕಾರಣಕ್ಕೆ ನಿರ್ಲಕ್ಷಿಸಿದರೆ, ರೋಗನಿರ್ಣಯದಲ್ಲಿ ವಿಳಂಬವಾಗುವ ಸಾಧ್ಯತೆ ಇದೆ ಎಂದು ವೈದ್ಯರು ತಿಳಿಸಿದ್ದಾರೆ.
ಚಿಕಿತ್ಸೆ ವಿಳಂಬವಾದರೆ ಅಪೆಂಡಿಕ್ಸ್ ಒಡೆದು ಹೊಟ್ಟೆಯೊಳಗೆ ಸೋಂಕು ಹರಡುವ ಅಪಾಯವಿದ್ದು, ಇದರಿಂದ ಚಿಕಿತ್ಸೆ ಮತ್ತಷ್ಟು ಸಂಕೀರ್ಣವಾಗುವುದರ ಜೊತೆಗೆ ಚೇತರಿಕೆಗೂ ಹೆಚ್ಚು ಸಮಯ ಬೇಕಾಗುತ್ತದೆ.
ಸಮಯಕ್ಕೆ ಸರಿಯಾಗಿ ರೋಗವನ್ನು ಪತ್ತೆಹಚ್ಚಿದರೆ ಕೀಹೋಲ್ (ಲ್ಯಾಪರೋಸ್ಕೋಪಿಕ್) ಶಸ್ತ್ರಚಿಕಿತ್ಸೆ ಮೂಲಕ ಸುಲಭವಾಗಿ ಚಿಕಿತ್ಸೆ ನೀಡಬಹುದಾಗಿದ್ದು, ಹೆಚ್ಚಿನ ಮಕ್ಕಳು ಕೆಲವೇ ದಿನಗಳಲ್ಲಿ ತಮ್ಮ ಸಾಮಾನ್ಯ ಚಟುವಟಿಕೆಗಳಿಗೆ ಮರಳಬಹುದು.
ಮೆಡಿಕವರ್ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯ ಮಕ್ಕಳ ವಿಭಾಗದ ಮುಖ್ಯಸ್ಥರಾದ ಡಾ. ವೇಣುಗೋಪಾಲ್ ರೆಡ್ಡಿ ಮಾತನಾಡಿ, “ಮಕ್ಕಳು ಹೊಟ್ಟೆನೋವು ಎಂದು ಹೇಳುವುದು ಸಾಮಾನ್ಯ. ಆದರೆ ನೋವು ಕಡಿಮೆಯಾಗದೇ ಮುಂದುವರಿದರೆ, ಹೊಟ್ಟೆಯ ಬಲ ಕೆಳಭಾಗದಲ್ಲಿ ನೋವು ಇದ್ದರೆ ಅಥವಾ ಜ್ವರ, ವಾಂತಿ, ಆಹಾರ ಸೇವಿಸಲು ನಿರಾಕರಿಸುವಂತಹ ಲಕ್ಷಣಗಳು ಕಂಡುಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು. ಆರಂಭದಲ್ಲೇ ಅಪೆಂಡಿಸೈಟಿಸ್ ಪತ್ತೆಯಾದರೆ ಚಿಕಿತ್ಸೆ ಸುಲಭವಾಗಿದ್ದು, ಮಕ್ಕಳು ಬೇಗ ಗುಣಮುಖರಾಗುತ್ತಾರೆ,” ಎಂದು ಹೇಳಿದರು.
ಮೆಡಿಕವರ್ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಮಕ್ಕಳ ತಜ್ಞರು, ಮಕ್ಕಳ ಶಸ್ತ್ರಚಿಕಿತ್ಸಕರು, ತುರ್ತು ಚಿಕಿತ್ಸಾ ತಜ್ಞರು, ಅರಿವಳಿಕೆ ತಜ್ಞರು ಹಾಗೂ ಮಕ್ಕಳ ತೀವ್ರ ನಿಗಾ ತಜ್ಞರು ಸಮನ್ವಯದೊಂದಿಗೆ ಮಕ್ಕಳ ತುರ್ತು ಶಸ್ತ್ರಚಿಕಿತ್ಸೆ ಅಗತ್ಯವಿರುವ ಪ್ರಕರಣಗಳಿಗೆ ಸಮಗ್ರ ಚಿಕಿತ್ಸೆ ನೀಡುತ್ತಿದ್ದಾರೆ.
ಮೆಡಿಕವರ್ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ಕುರಿತು
ಬೆಂಗಳೂರು ವೈಟ್‌ಫೀಲ್ಡ್‌ನಲ್ಲಿರುವ ಮೆಡಿಕವರ್ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯು ಪ್ರಸೂತಿ ಮತ್ತು ಸ್ತ್ರೀರೋಗ, ಫೀಟಲ್ ಮೆಡಿಸಿನ್, ನವಜಾತ ಶಿಶು ಆರೈಕೆ (ನಿಯೋನೇಟಾಲಜಿ), ಮಕ್ಕಳ ವೈದ್ಯಕೀಯ, ಮಕ್ಕಳ ಶಸ್ತ್ರಚಿಕಿತ್ಸೆ ಹಾಗೂ ಮಕ್ಕಳ ತೀವ್ರ ನಿಗಾ ಚಿಕಿತ್ಸೆಯಲ್ಲಿ ಸಮಗ್ರ ಮತ್ತು ಅತ್ಯಾಧುನಿಕ ಸೇವೆಗಳನ್ನು ಒದಗಿಸುತ್ತಿರುವ ವಿಶೇಷ ತೃತೀಯ ಹಂತದ ಚಿಕಿತ್ಸಾ ಕೇಂದ್ರವಾಗಿದೆ.






Leave a Reply